Expressed!


ಮುಸುಕಾದ ಮರ


(ಸಿದ್ದಾಪುರ ಎಂಬ ಸಣ್ಣ ಹಳ್ಳಿ... ರಾತ್ರೆಯ ಕತ್ತಲಿನಲ್ಲಿ 5 ಹುಡುಗರು ದೂರದಲ್ಲಿ ಅಡಗಿಕೊಂಡು ಮರದತ್ತರ ಇಣಿಕಿ ನೋಡುತ್ತಾ....)

ಸೀನ:- ಲೇ ಮುಸುಕು, ನೋಡ್ದೀನ್ಲಾ, ಇತೊಟ್ಗೇನೆ ಕಣ್ಲಾ ಕಾಯಿ ಬಿಡೋದು.

ಬದ್ರಿ:- ಲೋ ಸೀನ ಬಾರ್ಲಾ ಓಗಿ ಕಿತ್ತುವ, ಅಪ್ಪಯ್ಯಾ ನೋಡದ್ರೆ ಬೈತಾನೆ...... ಬಾರಲೇ ಬೇಗ್ನೆ...

ಆಚಾರಿ:- ತಾಳ್ರೋ, ಆ ಮಾದಪ್ಪ ಹೋಗ್ಲಿ, ಇಲ್ಲ ಅಂದ್ರೆ ಚರ್ಮ ಕಿತ್ತೊಗಂಗೆ ಓಡಿತ್ತಾನೆ....

ಮುಸುಕು:- ಲೋ, ನಂಗೂ ಕೀತ್ಕೊಡ್ರಲ್ಲ, ಬರಿ ನೀವೇ ತಿನ್ನಬೇಡ್ರಲ್ಲ...

ಅಂಬು:- (ತೋಳನ್ನು ತಟ್ಟಿ..) ಓ ಅಮ್ಮಣ್ಣಿ, ಹೌದ್ಲಾ ನಾವೇ ಕಿತ್ತ್ಕೊಡ್ತೀವಿ, ಅಯ್ಯನವರು ಎಲೌವ್ರೆ, ಅ ಮರದಾಗ ಹಣ್ಣು ಯಾರ್ ತಿಂತಾರೋ ಅವ್ರೆ ಕಿತ್ತ್ಕೊಬೇಕಂತೆ..... ಪಾಪ ಬರ್ತದೆ ಗೊತ್ತಾ..

(ಹದ್ದಿನ ಕಣ್ಣಿನಂತೆ ಕಾದು, ತಥ್ ಅಂತ ಧುಮಿಕಿ, ಮಾದಪ್ಪ ಹೋದ್ಮೇಲೆ ಸೀನ, ಬದ್ರಿ ಆಚಾರಿ ಮತ್ತು ಅಂಬು ಮರವನ್ನು ಹತ್ತಿ, ಅಪರೂಪದ ಅ ಹಣ್ಣನು ಕಿತ್ತಿ ಸವಿಯುತ್ತಾ, ಕೆಳೆಗೆ ನಿಂತ ತಮ್ಮ ಸ್ನೇಹಿತ ಮುಸುಕನ್ನು ನೋಡುತ್ತಾ.....)
ಬದ್ರಿ:- ಲೇ ಮುಸುಕು, ಯಾಕ್ಲಾ ನಿನ್ ಕಾಲ್ ಅಂಗವೇ... ಚಿಕ್ ವಯಸಿನಲ್ಲಿ ಪಾಪ ಮಾಡಿದ್ಯ ಕಣ್ಲಾ ನೀನು....
ಮುಸುಕು:- (ತನ್ನನು ತಾನು ಸಂಜಾಸ್ಕೊಂದು):- ಊ! ನಾನೇನು ಮಾಡಿಲ್ಲ, ನೀವೇ ಪಾಪ ಮಾಡೋದು ಕಂಡ್ರಲ್ಲ.. ತಿನ್ನಿ, ತಿನ್ನಿ ನೀವೇ ತಿನ್ನಿ ಹಣ್ನವ, ಅ ದ್ಯಾವ್ರು ನಂಗೆ ಒಂದು ದಿನ ಈಮರ ಹತ್ತೋ ಸಕ್ತಿ ಕೊಡ್ತಾನೆ, ಆಗ್ ತೋರಿಸ್ತೀನಿ ನಿಮಗೆಲ್ಲ.... (ಕೊಪಿಸ್ಕೊಂದು ಮನೆ ಕಡೆ ದಾರಿ ಹಿಡಿತ್ತಾನೆ ..)
(ಹಣ್ಣು ಸಿಗ್ಲಿಲ್ವಲ್ಲ ಅನ್ನೋ ದುಃಖ ಅ ಎಳೆ ಮನಸ್ಸಿಗೆ ಕಾಡುತಿತ್ತು....ಅಷ್ಟರಲ್ಲಿ ಸೀನ)

ಸೀನ:- ಲೇ ಮುಸುಕು, ಅದಿರ್ಲಿ, ನಿನ್ ಹೆಸರು ಯಾಕ್ಲ ಮುಸುಕು ಅಂತಿದೆ?
(ತಲೆ ಎತ್ತದ ಮುಸುಕು, ಕೋಪದಿಂದ, ಮನೆ ಕಡೆ ಹೆಜ್ಜೆ ಹಾಕುತ್ತಾನೆ)

(ಸಣ್ಣದಾದ ಹಳ್ಳಿ ಮನೆ, ಬಾಗ್ಲು ತಳ್ಳಿ, ದಿಪ್ಪ್ವನ್ನು ಹಚಿ ಮುಸುಕು ಸ್ಲೇಟ್ ಉ ಬಳಪ ಹಿಡಿದ್ದು ಮರ ಒಂದರ ಚಿತ್ರವನ್ನು ಬಿಡಿಸುತ್ತಾನೆ, ಅಷ್ಟರಲ್ಲಿ, ಅವ್ವ ಬರ್ತಾಳೆ ...)

ಅವ್ವ:- ಯಲ್ಲಿಗ್ಲಾ ಹೋಗಿದ್ದೆ ಮುಸುಕು, ಇತೊಟ್ನಲ್ಲಿ?
ಮುಸುಕು:- (ಎಳೆ ಕೋಪ, ವಯಸ್ಸು ತುಂಬಾ ಚಿಕದ್ದು, ಮನಸ್ಸು ಮೃದು..):- ಊ! ಅವ್ವಾ.... ಮರದ ತಾವ ಓಗಿದ್ದೆ... (ಮುಖ ದಪ್ಪ ಮಾಡ್ಕೊಂಡು... ಅವ್ವನ ತೊಡೆಮೇಲೆ ಬಂದು ಕೂರುವನು..)
ಅವ್ವ:- ಯಾಕ್ಲ ಮುಸುಕು, ಎನಾಯ್ತ್ಲಾ? ಏಳು ಮುದ್ದೆ ಇಡ್ತ್ತೀನಿ....
ಮುಸುಕು:- ನನಗೇನು ಬೇಡಾ!
ಅವ್ವ:- ಯಾಕ್ಲ ಮುಸುಕು?
ಮುಸುಕು:- ಅವ್ವ, ನನಗ್ಯಾಕೆ "ಮುಸುಕು" ಅಂತ ಹೆಸರಿಟ್ಟೆ?
ಅವ್ವ:- (ಹುಸಿ ಹುಸಿ ನಗುತ್ತಾ):- ಹ ಹ ಅಲ್ಲ ಕಣ್ಲಾ ಅದ್ದಕಾ ಈ ಪಾರಿ ಕೋಪ ನಿಂಗೆ?
ಮುಸುಕು:- (ಅಮ್ಮನ ಸೆರಗನ್ನು ಗಂಟ್ ಹಾಕುತ್ತಾ....):- ನೀ ಸುಮ್ನೆ ಏಳು ಈಗಾ....
ಅವ್ವ:- ಅಲ್ಲ ಕಣ್ಲಾ, ನೀನು ತುಂಬಾ ಸಣ್ಣವನಾಗಿದ್ದಾಗ, ನಿಂಗೆ ಹೆಸರು, ಅಯ್ಯನವರು ಇಟೀ ಇರ್ಲಿಲ್ಲ, ಒಂದ್ ದಿನಾ ನೀನು ನಮ್ಮ ಹಳ್ಳಿ ಜಾತ್ರೆ ಇಂದ ಬರ್ತಾ..... ತಪ್ಪುಸ್ಕೊಂಡು ಅ ಮರದಪ ಓಗಿ, ಕಂಬ್ಳಿಒಂದನ್ನು ಮುಸುಕಾಕೊಂಡಿದ್ದೆ ಮಗಾ.... ಯೀಟ್ ಹುಕಿದ್ರು ಸಿಗ್ಲೇಇಲ್ಲ, ಆಗ ಅಯ್ಯನವರು ಅ ಮರದಪ ಉಡುಕಿ ಅಂತ ಯೆಳದ್ರು, ಅವತ್ತಿನಿಂದ ನಿನ್ನ ಎಲ್ರೂ "ಮುಸುಕು","ಮುಸುಕು" ಅಂತ ಕರಿಯಾಕೆ ಸುರು ಮಾಡದ್ರು ಮಗಾ.. ಈಗ ಯಾಕ್ಲ ಅದು ನಿಂಗೇ...?
ಮುಸುಕು:- (ಇನ್ನು ದುಃಖದಿಂದ )ಏನು ಇಲ್ಲಾ, ಮತ್ತೆ ನನ್ ಕಾಲ್ ಯಾಕೆ ಇಂಗೆ? ನಾನು ಮರ ಯಾವಾಗ ಹತ್ತೋದು?
ಅವ್ವಾ:- (ಉತ್ತರವನ್ನು ಕೊಡಲಾಗದೆ) ಮುಸುಕು, ನಡೀ ಮುದ್ದೆ ತಿಂದು ಮಲ್ಕೋ ಮಗ.. ಅಪ್ಪ ಬರ್ತಾನೆ ಈಗಾ.. ನಾಳೆ ಇಸ್ಕೂಲ್ ಗೆ ಬೇಗ ಊಗ್ಬೇಕು.....
(ಕಣ್ಣಿನ, ಕಂಬನಿ ಹಾಗೆ ನಿಧಾನವಾಗಿ ಮೊಗತ್ತರ ಬಂದು ಝಂ ಅಂತ ನೆಲೆದ ಮೇಲೆ ಬೀಳುತ್ತದೆ.. ಮುಸುಕು ಮುದ್ದೆಯನ್ನು ತಿಂದು ಸ್ಲೇಟ್ ಅಲ್ಲಿ ಬರೆದ ಮರದ ಚಿತ್ರದ ಮೇಲೆ ತನ್ನ ಒಂದು ಚಿತ್ರ ಬಿಡಿಸುತ್ತಾನೆ.. ದೀಪ ನಿಧಾನವಾಗಿ ಆರುತ್ತದೆ..)

(ಬೆಳಗೆ ಸೂರ್ಯ ಹುಟ್ಟಿದ ಕೂಡಲೇ, ಮುಸುಕು ಎದ್ದು ಸ್ನಾನ ಮಾಡಿ, ಸ್ಕೂಲ್ನ ಉಡುಪನ್ನು ಹಾಕೊಂಡು.. ತಲೆ ಬಾಚ್ಕೊಂಡು..)

ಮುಸುಕು:- ಅವ್ವಾ, ನಾನು ಇಸ್ಕೂಲ್ಗೆ ಒಯ್ತೀನಿ...
(ಹಿತ್ತಲಲ್ಲಿ ಇದ್ದ ಅವ್ವಾ... )
ಅವ್ವಾ:- ಯಾಕ್ಲ? ಈಟ್ ಬೇಗ ಒಯ್ತಾದ್ಯ?
ಮುಸುಕು:- ನಂಗೆ ಕ್ಲಾಸ್ ಐತೆ.... (ಬ್ಯಾಗ್ ಅನ್ನು ಹಾಕೊಂಡು... ದೇವಸ್ತಾನದ ಕಡೆ ಓಡುತ್ತಾನೆ..)
(ದಾರಿಯಲ್ಲಿ, ಸೀನ, ಬದ್ರಿ ಮುಸುಕನ್ನು ಕಂಡು..)

ಬದ್ರಿ:- ಯೆಲ್ಲಲ್ಲಾ ಒತ್ತಾದ್ಯ? ಇಸ್ಕೂಲ್ ರಜಾ ಕಣ್ಲಾ ಇವತ್ತು....

ಮುಸುಕು:- ಊ! ನಂಗೆ ಗೊತ್ತು (ಮುಸುಕು, ಜೋರಾಗಿ ನಡೆಯಲು ಪ್ರಯತ್ನ ಮಾಡ್ತಾನೆ)

ಸೀನ:- ನಿಲ್ಲಾ... ಲೇ ಮುಸುಕು, ಮರದಪ ಬರ್ತ್ಯಾ ?

ಮುಸುಕು:- ನೀನೆ ಓಗು, ನೀವೇ ತಿನ್ನಿ ಕಾಯ್ನಾ...

ಬದ್ರಿ:- ಊ! ಬುಡು, ನಾವೇ ತಿಂತೀವಿ.. ಬಲೆ ಆಯ್ತು ಕಣ್ಲಾ ನಿಂದು .....

(ದೇವಸ್ತಾನದ ಕಟ್ಟೆ ಮೇಲೆ ಕೂರೋ ಅಯ್ಯನವರು ಊರಿಗೆ ದಾರಿದಿಕ್ಕಂಗೆ, ಬೂತಾಟಿಕೆ ಇಲ್ಲದ, ಆ ಮನುಷ್ಯ ಊರನೌರಗೆಲ್ಲಾ ತುಂಬಾ ಬೇಕಾದವರು ....ಸುಮಾರು ೭೫ ವರ್ಷದ ಆ ಮನುಷ್ಯ ಸದಾ ಧ್ಯಾನ ಮಾಡುತ್ತಾ ಕಾಲ ಕಳೆಯುತ್ತಾರೆ.)
(ಧ್ಯಾನ ಮಾಡುತ್ತಾ ಕುಳಿತಿದ್ದ, ಅಯ್ಯನವರನ್ನು ಕಾಣಲು ಮುಸುಕು ಹರಿಬರಿಯಲ್ಲಿ ಬರುತ್ತಾನೆ.. )

ಮುಸುಕು:- ಅಯ್ಯನವರ!.... (ಕೊಗುವನು) ಅಯ್ಯನವರ !......

ಅಯ್ಯನವರು :- ಯಾರದು?

ಮುಸುಕು:- ನಾನು ಮುಸುಕು!

ಅಯ್ಯನವರು:- ಮುಸುಕಾ?? ಏನೋ ಅದು ಈಟ್ ಬೇಗಾ? ಬಂದಿದ್ಯಾ....? ಇಸ್ಕೂಲ್ ಇಲ್ವಾ?

ಮುಸುಕು:- ಇಲ್ಲಾ ಅಯ್ಯನೋವ್ರ.. ಇಸ್ಕೂಲ ರಜೆ ಇವತ್ತು... ಅಯ್ಯನೋವ್ರ ನಾನು ನಿಮ್ಮನ ಒಂದು ಮಾತ್ ಕೇಳ್ಬೇಕು...

ಅಯ್ಯನವರ:- ಏನೋ ಅದು?

ಮುಸುಕು- ಅಯನೋವ್ರಾ, ನಾನು ಸಣ್ಣವನಾಗಿದ್ದಾಗ, ಮುಸುಕು ಆಕೊಂಡು ಆ ಮರದಪ ಇದ್ದೆ ಅಂತ ನಿಮ್ಗೆಂಗೆ ತಿಳೀತು?

(ಅಯ್ಯನವರು ಜೋರಾಗಿ ನಕ್ಕಿ, ತನ್ನನು ತಾನು ಸುಧಾರಿಸಿಕೊಂಡು...)

ಅಯ್ಯನವರು :- ಅಲ್ಲಾ ಕಣ್ಲಾ, ಇದನ್ ಕೇಳೋದಕ್ಕೆ ಬಂದ್ಯಾ?

ಮುಸುಕು:- ನೀವು ಹೇಳಿ ಅಯ್ಯನೋವ್ರ ....
ಅಯ್ಯನೋವ್ರ:- ನಾನೇನು ಮಾಯವಿನ? ಅಲ್ಲಾ ಕಣ್ಲಾ ನೀನು ತಪ್ಪಿಸ್ಕೊಂಡು ಮರದಪ ಬಂದು ಮುಸುಕು ಹಾಕೊಂಡು ಬಚ್ಚಿತ್ಕೊಂಡಿದ್ದನ್ನು ನಾನು ಅಲ್ಲೇ ಇದ್ದು ನೋಡ್ದೆ ಕಣ್ಲಾ, ಅದನ್ನೇ ನಿಮ್ಮ ಅವ್ವಾ ಬಂದಾಗ ನಾನು ಏಳಿದ್ದು...
ಮುಸುಕು:- (ನಿರಾಶೆ ಇಂದ, ತಲೆ ಬಗ್ಗಿಸಿ..) ಹೌದಾ? (ಕಣ್ಣಲ್ಲಿ ತಕ್ಷಣ ನೀರು...)

ಅಯ್ಯನವರು:- ಯಾಕ್ಲ ಅಲ್ತಿದ್ದೀ?

ಮುಸುಕು:- ಅಯ್ಯನೋವ್ರೆ, ಬದ್ರಿ, ಸೀನ, ಅಂಬು, ಆಚಾರಿ ಎಲ್ಲಾ, ಮರ ಹತ್ತಿ ದಿನಾ ಆ ಕಾಯನ್ನು ತಿಂತಾರೆ, ನಂಗೆ ಕಾಯಿ ಕೊಡದಿಲ್ಲ ಅಯ್ಯನೋವ್ರಾ... ನನ್ ಕಾಲು ಯಾಕೆ ಇಂಗಿದೆ ಅಯ್ಯನೋವ್ರ? ನಾನು ಆ ಮರ ಹತ್ತಿ ಆ ಕಾಯನ್ನು ತಿನ್ನಕೆ ಆಗೋದಿಲ್ವಾ ಅಯ್ಯನೋವ್ರ?
(ಜೋರಾಗಿ ಅಳುತಾನೆ...)

ಅಯ್ಯನವರು:- ಮುಸುಕು, (ಸಮಾಧಾನ ಮಾಡುತ್ತಾ) ಇಲ್ಲಿ ಬಾ!, ಯಾರ್ ಎಳಿದ್ದು ನಿಂಗೇ? ನಿನ್ ಕಾಲ್ಗೇನೂ ಆಗಿಲ್ಲ, ಆ ದ್ಯಾವ್ರು ಸ್ವಲ್ಪ ಕೊಪಿಸ್ಕೊಂಡು ನಿಂಗೇ ಸಿಸ್ಕ್ಷೆ ಕೊಟ್ಟವ್ನೆ ಅಷ್ಟೇ... ನೀನೂ ಆ ಮರ ಹತ್ತಿ ಕಾಯನ್ನು ತಿನ್ನು...

ಮುಸುಕು:- ಯಾಕೆ ಅಯ್ಯನೋವ್ರೆ ಆ ದ್ಯವರಿಗೆ ನನ್ ಮೇಲೆ ಕೊಪಾ?

ಅಯ್ಯನವರ:- ನೀನು ಸಣ್ಣವನಾಗಿದ್ದಾಗ ಆ ಮರದಪ ಓಗಿ ಮುಸುಕು ಹಾಕೊಂಡು ನಿನ್ ಅವ್ವಾ ನಾ ಆಟಾ ಆಡಿಸ್ದ್ಯಲ್ಲಾ, ಅದಕ್ಕೆ ನಿಂಗೇ ಸಿಸ್ಕ್ಷೆ ಕೊಟವ್ನೆ, ಹೋಗಿ ಆ ಮರದಪ ಕ್ಷಮಾಪಣೆ ಕೇಳ್ಕೋ ನಿನ್ನ ಕಾಲನ್ನು ಆ ದ್ಯಾವರು ಸರೀ ಮಾಡ್ತಾನೆ.

(ತಕ್ಷಣ, ಕಣ್ಣ ಒರಿಸಿಕೊಂಡು.. ಮುಸುಕು ಮರದ ಹತ್ತಿರ ಹೋಗುತ್ತಾನೆ....ಅಯ್ಯನವರು, ಮುಸುಕು ಕುಂಟದ್ದನ್ನೇ ನೋಡುತ್ತಾ ಆಕಾಶದತ್ತ ನೋಡುತ್ತಾರೆ......)

(ಮುಸುಕು ಮರದ ಹತ್ತಿರ ಬಂದು ಯಾರು ಇಲ್ದೇರದನ್ನು ನೋಡಿ... ಅಲ್ಲಿ ಪಕ್ಕದಲ್ಲಿ ಕುಳಿತು..... ಮರವನ್ನೇ ನೋಡುತ್ತಾ ತನ್ನ ಬ್ಯಾಗಿಂದ ಸ್ಲೇಟ್ ಅನ್ನು ತೆಗಿತ್ತಾನೆ...)

(ಮರವನ್ನು ಉದ್ದಗಲಕ್ಕೂ ಒಂದು ಸಲಾ ನೋಡಿ.. ಮರದ ಹತ್ತಿರ ಹೋಗಿ ಮರವನ್ನು ಮುಟ್ಟಿ ಕಣ್ಣನು ಮುಚ್ಚುತ್ತಾನೆ...)

ಮುಸುಕು:- ಮರ, ನಾನು ಮುಸುಕು, ಸಿದ್ದಾಪುರ ನಮ್ಮ ಊರು, ೩ ನೆ ತರಗತಿ, ನಾನೇ ಕ್ಲಾಸ್ಗೆ firstu.....
(ಮುಚ್ಚಿದ ಒಂದು ಕಣ್ಣನು ಸಣ್ಣದಾಗಿ ತೊರೆದು ಮರವನ್ನು ನೋಡುತ್ತಾ....)
ಅಯ್ಯನೋವರು ಯೇಳದ್ರು ನಿನ್... ಅಲ್ಲಾ ನಿಮ್.. ಹತ್ರ ಬಂದು ಕ್ಷಮಾಪಣೆ ಕೀಳ್ಬೀಕು ಅಂತ.. ಆದ್ರೆ ಎಂಗ್ ಕೇಳೋದು ಅಂತ ನಾನು ಕೇಳೆ ಇಲ್ವಲ್ಲ ......ಎಂಗೆ ಕೇಳೋದು ಕ್ಷಮಾಪಣೆ, ಮರ?
(ಮರ ಸುಮ್ನೆ ಇರೋದನ್ನ ನೋಡಿ...)
ಊ|| ಆಯ್ತು ಅದಕ್ಕೂ ನೀನು ಕೂಪ ಮಾಡ್ಕೋಬೇಡಾ ಇನ್ನೂ, ನಾನೇ ಯೂಚಿಸ್ತೀವ್ನಿ... taame ಕೊಡು...ಅದೂ.. ಅದೂ ನಾನು ಏನ್ ಏಳ್ತೀನಿ ಅಂದ್ರೇ... ಅದೂ.... (ತಕ್ಷಣ ತಲೆಗೆ ಏನೋ ತೋಚ್ದಂಗೆ..)

ಸರ ಸರ ನೆ ಸ್ಲೇಟ್ ಅನ್ನು ಹಿಡಿದು ದೊಡ್ದಾಗಿ ಏನೋ ಬರೆದು..ಸ್ಲೇಟ್ ಅನ್ನು ತಿರುಗಿಸುತ್ತಾನೆ.. ಅದ್ರಲ್ಲಿ ದೊಡ್ದಾಗಿ "SORRY " ಅಂತ ಬರ್ದಿರ್ತಾನೆ..

ಮುಸುಕು:- ನೋಡು ಓದು, ಇಸ್ಕೊಲ್ನಲ್ಲಿ ಎಲ್ಕೋಟ್ಟಿದ್ದು...... (ಸ್ಲೇಟ್ ಅನ್ನು ಅಂಗೇ ಹಿಡಿದು....)

ಮುಸುಕು:- ಮರ ನಿಂಗೇ ಇಂಗ್ಲಿಸ್ ಬರ್ತದೆ ತಾನೇ.....? (ಮರವನ್ನು ಅಂಗೇ ನೋಡುತ್ತಾ .....ಮೈಮರೆಯುವನು )

(ಅಷ್ಟರಲ್ಲಿ... ಮುಸುಕುವಿನ ತಂದೆ ಅವನನ್ನು ಕರೆಯುತ್ತಾರೆ...)

ಅಪ್ಪಯ:- ಲೋ, ಮುಸುಕು, ಇಲ್ ಏನ್ಲಾ ಮಾಡ್ತಾಇದ್ದೀಯ, ಮುಸುಕು! ಪ್ಯಾಟೆ ಇಂದ ದಾಕಾಟ್ರು ಬಂದವ್ರೇ ಕಣ್ಲಾ, ನಿನ್ ಕಾಲ್ ಗುಣ ಪಡಿಸ್ತಾರಂತೆ, ಬಾರ್ಲಾ ನಿನ್ನ ಬೇಟಿಯಾಗ್ಬೇಕಂತೆ...

(ಈವಿಷಯ ಕೇಳಿದ ಕೂಡಲೇ ಮುಸುಕಿನ ಮುಖದಲ್ಲಿ ಹೊಸದೊಂದು ಕಳೆ ಕಾಣಿಸಿತ್ತು, ಖುಷಿ ಇಂದ.. ಸ್ಲೇಟ್ ಅನ್ನು ಬ್ಯಾಗಿಗೆ ಹಾಕೊಂಡು... ಜೋರಾಗಿ ನಗುತ್ತಾ....)

ಮುಸುಕು:- ಬಂದೆ ಅಪ್ಪಯ ನೀ ನಡೀ....

ಅಪ್ಪಯ :- ಬಿರುನೇ ಬಾರ್ಲಾ....

ಮುಸುಕು :- ಬಂದೆ ನೀ ನಡೀ ಅಪ್ಪಯಾ....

(ಅಪ್ಪಯನ್ನು ಕಳಿಸಿ... ಖುಷೀಂದ ಮರವನ್ನು ಒಂದು ಸಲಿ ನೋಡಿ ..... ಜೋರಾಗಿ ನಕ್ಕು...)

ಮುಸುಕು:- ಲೇ ಮರ ನಿಂಗೇ ಇಂಗ್ಲಿಸ್ ಬರುತ್ತೇ........ (ಜೋರಾಗಿ ನಗುತ್ತಾನೆ...)

__________________________________________________________
(ಹಲವಾರು ವರ್ಷಗಾಳಾದ ಮೇಲೆ... ಮುಸುಕು ಪೇಟೆ ಯಲ್ಲಿ ಚಿಕಿತ್ಸೆ ಮುಗಿಸ್ಕೊಂಡು ಹಳ್ಳಿಗೆ ಬರುತ್ತಾನೆ...)
(ಹಳ್ಳಿಗೆ ಬಂದ ತಕ್ಷಣ, ಮರದ ಹತ್ತಿರ ಓಡುತ್ತಾನೆ... )
(ಮುಸುಕು ಹಳ್ಳಿಗೆ ಗುಣವಾಗಿ ಬಂದಿದ್ದಾನೆ ಅಂತ ತಿಳಿದು, ಸೀನ, ಬದ್ರಿ, ಅಂಬು ಮತ್ತು ಆಚಾರಿ ಅವನ್ನನ್ನು ಬೇಟಿಯಾಗಲು ಅವನ ಮನೆ ಹತ್ತಿರ ಬರುತ್ತಾರೆ.. ಅವನು ಮನೆಯಲ್ಲಿ ಇಲ್ಡಿರೋದನ್ನ ನೋಡಿ ಅವರೂ ಮರದ ಹತ್ತಿರ ಓಡುತ್ತಾರೆ...)

(ಮುಸುಕು, ಆಶರ್ಯದಿಂದ ನಿಂತಿರುವುದನ್ನು ಕಂಡು, ಎಲ್ಲರೂ ಅವನ ಹತ್ತಿರ ಓಡುತ್ತಾರೆ....)

ಸೀನ:- ಸಮಾಧಾನ ಮಾಡ್ಕೋ ಮುಸುಕು..

ಮುಸುಕು:- ಯಾಕೆ?

ಬದ್ರಿ:- ಈ ಮರದ ಹಣ್ಣೆ ಇದಕ್ಕೆ ಶಾಪವಾಯ್ತು..

ಅಂಬು:- ಮರದ ಹಣ್ಣಿನಿಂದ ಹುಡುಗರ ಕಾಟ ಜಾಸ್ತಿ ಆಯ್ತು ಅಂತ ಪಂಚಾಯ್ತಿಯವರು ಮರವನ್ನು ಕಡಸ್ ಹಾಕದ್ರು.....

ಆಚಾರಿ:- ನಾವೆಲ್ಲಾ ತುಂಬಾ ಪ್ರಯತ್ನ ಮಾಡಿದ್ವಿ ಆದ್ರೆ ಏನು ಪ್ರಾಯೋಜನೆ ಆಗ್ಲಿಲ್ಲಾ...

(ಮುಸುಕಿನ ಕಣ್ಣಿಂದ ಇನ್ನೇನು ಕಣ್ಣೇರು ನೆಲಕ್ಕೆ ಬೀಳುವಷ್ಟರಲ್ಲಿ....)

ಬದ್ರಿ:- ಇದೂ ಆ ಮರದ ಕೊನೆಯ ಬುಡಾ... ನಿನಗೋಸ್ಕರ ಇಟಿದ್ವೀ....
................................................................................................................................
(Image Courtesy:- http://jordebot.ಕಂ)

Categories:

Leave a Reply